ಸಾಲ ಮರುಪಾವತಿ ಮಾಡಬೇಕೆಂದು ಬ್ಯಾಂಕ್ ರೈತನಿಗೆ ನೋಟೀಸ್ ನೀಡಿತ್ತು. ನೋಟೀಸ್ ನೋಡಿ ಮನನೊಂದು ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಬ್ಯಾಂಕ್ ಮ್ಯಾನೇಜರ್ ಅರೆಸ್ಟ್ ಆಗಿದ್ದಾರೆ.ಬ್ಯಾಂಕ್ ನೋಟೀಸ್ ಗೆ ಮನನೊಂದ ರೈತ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಕವಲಗಿ ಗ್ರಾಮದಲ್ಲಿ ನಡೆದಿದೆ.ಆನಂದ ಭೀಮಪ್ಪ ಠಕ್ಕಳಕಿ 45 ಆತ್ಮಹತ್ಯೆ ಮಾಡಿಕೊಂಡಿದ್ದ ರೈತನಾಗಿದ್ದಾನೆ. ನೋಟೀಸ್ ನೀಡಿದ್ದ ಬಸವನವಾಗೇವಾಡಿ ತಾಲೂಕಿನ ತೆಲಗಿ ಗ್ರಾಮದ ಕೆನೆರಾ ಬ್ಯಾಂಕ್ ಮ್ಯಾನೇಜರ್ ರಾಹುಲ್ ಪೋಳ