Widgets Magazine

ವೃದ್ಧನೊಬ್ಬ ಪತ್ನಿಯನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?

ಬೆಂಗಳೂರು| pavithra| Last Modified ಬುಧವಾರ, 22 ಮೇ 2019 (09:33 IST)
ಬೆಂಗಳೂರು :  ವೃದ್ಧನೋರ್ವ ತನ್ನ ಪತ್ನಿಯನ್ನು ಕೊಂದು ಬಳಿಕ ತಾನೂ ಸೇವಿಸಿ ಆತ್ಮಹತ್ಯೆಗೆ ಶರಣಾದ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಾರಾಯಣಪ್ಪ(70) ಕೊಲೆ ಮಾಡಿ  ಆತ್ಮಹತ್ಯೆ ಮಾಡಿಕೊಂಡ ವೃದ್ಧ, ಲಕ್ಷ್ಮಮ್ಮ(65) ಕೊಲೆಯಾದ ಪತ್ನಿ. ಈ ದಂಪತಿಗಳ  ನಡುವೆ ಆಸ್ತಿ ವಿಚಾರಕ್ಕೆ ಜಗಳ ನಡೆದ ಹಿನ್ನಲೆಯಲ್ಲಿ ಲಕ್ಷ್ಮಮ್ಮ, ತನ್ನ ಪತಿಯನ್ನು ಬಿಟ್ಟು ಮಗ ಹಾಗೂ ಮಗಳ ಜೊತೆ ವಾಸಿಸುತ್ತಿದ್ದಳು. ಆದರೆ ನಾರಾಯಣಪ್ಪ ಅವರು ತಮ್ಮ ಬಳಿ ಇದ್ದ 32 ಗುಂಟೆ ಜಮೀನನ್ನು ಮಾಡಿದ್ದರು. ಈ ವಿಚಾರಕ್ಕೆ ಮಗ ಹಾಗೂ ಮಗಳು ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.


ಇದರಿಂದ ಕೋಪಗೊಂಡ ನಾರಾಯಣಪ್ಪ ದೂರು ಹಿಂಪಡಿಯುವಂತೆ ಪತ್ನಿಗೆ ಒತ್ತಡ ಹೇರುತ್ತಿದ್ದ. ಇದಕ್ಕೆ ಪತ್ನಿ ಒಪ್ಪದಿದ್ದಾಗ ಆಕೆ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ಪರಿಣಾಮ ಆಕೆ ಸಾವನಪ್ಪಿದ್ದಾಳೆ. ನಂತರ ತಾನೂ ವಿಷ ಸೇವಿಸಿದ್ದು, ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಾಯಿಸಿದರೂ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾನೆ. ಈ ಘಟನೆಗೆ  ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 

 
 
 


ಇದರಲ್ಲಿ ಇನ್ನಷ್ಟು ಓದಿ :