ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆಗೆ ಕೊನೆಗೂ ಮುಹೂರ್ತ ಕೂಡಿಬಂದಂತಿದೆ. ಒಕ್ಕಲಿಗ ನಾಯಕನಿಗೇ ಪಟ್ಟಕಟ್ಟಲು ಕೇಸರಿ ಹೈಕಮಾಂಡ್ ನಿರ್ಧರಿಸಿದ್ದು, ಸಂಘಟನೆಯ ಹಿನ್ನೆಲೆ ಹಿಂದುತ್ವದ ಅಜೆಂಡಾ ಇರುವ ಸಿಟಿ ರವಿ ಆಯ್ಕೆ ಬಹುತೇಕ ಪಕ್ಕಾ ಎನ್ನಲಾಗ್ತಿದೆ. ಈ ಮಧ್ಯೆ ಮತ್ತೊಬ್ಬ ಪ್ರಬಲ ಒಕ್ಕಲಿಗ ನಾಯಕ ಸಾಮ್ರಾಟ್ ಅಶೋಕ್ ಗೆ ಚಾನ್ಸ್ ಮಿಸ್ಸಾಗಿರೋದ್ರ ಹಿಂದೆ ಸಾಕಷ್ಟು ಕಾರಣಗಳು ಕೇಳಿಬರ್ತಿವೆ .ರಾಜ್ಯ ಬಿಜೆಪಿಯ ಸಾರಥಿ ಆಯ್ಕೆಗೆ ಕೇಸರಿ ಹೈಕಮಾಂಡ್ ಕೊನೆಗೂ ಮುಹೂರ್ತ ಫಿಕ್ಸ್ ಮಾಡಿದಂತೆ ಕಾಣ್ತಿದೆ.