ಬಜೆಟ್ ಪ್ರತಿಯನ್ನು ಸಿಎಂ ಸಂಪೂರ್ಣ ಓದಿ ಮುಗಿಸಿದ ಬಳಿಕ ಎಲ್ಲಾ ಸದಸ್ಯರಿಗೆ ವಿತರಣೆ ಮಾಡಬೇಕು ಎನ್ನುವ ತೀರ್ಮಾನ ವಿರೋಧಿಸಿ ಸ್ಪೀಕರ್ ಗೆ ಬಿ.ಎಸ್.ಯಡಿಯೂರಪ್ಪ ಪತ್ರ ಬರೆದಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಲಿರುವ ಬಜೆಟ್ನ ಪ್ರತಿಯನ್ನು ವಿಧಾನಸಭೆಯಲ್ಲಿ ಸಂಪೂರ್ಣ ಓದಿ ಮುಗಿಸಿದ ನಂತರ ಎಲ್ಲ ಸದಸ್ಯರುಗಳಿಗೂ ವಿತರಿಸಬೇಕು ಎನ್ನುವ ತೀರ್ಮಾನಕ್ಕೆ ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ವಿರೋಧ ವ್ಯಕ್ತಪಡಿಸಿದ್ದಾರೆ.ಈ ಸಂಬಂಧ ಸಭಾಧ್ಯಕ್ಷರಾದ ರಮೇಶ್ಕುಮಾರ್ರವರಿಗೆ ಪತ್ರ ಬರೆದಿರುವ ಯಡಿಯೂರಪ್ಪ, ಬಜೆಟ್ ಭಾಷಣ ಓದಿದ ನಂತರ