ವಿಶ್ವಾಸಮತ ಮೇಲಿನ ಚರ್ಚೆ ಕೊನೆಗೊಳಿಸಲು ಹಾಗೂ ಬಹುಮತ ಸಾಬೀತು ಪಡಿಸಲು ಸ್ಪೀಕರ್ ಡೆಡ್ ಲೈನ್ ನೀಡಿದ್ದರೂ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಲಾಪಕ್ಕೆ ತಡವಾಗಿ ಆಗಮಿಸಿದ್ದರ ಕುರಿತು ಚರ್ಚೆಗಳು ಶುರುವಾಗಿವೆ. ವಿಧಾನಸಭೆಗೆ ಕುಮಾರಸ್ವಾಮಿ ನಾಲ್ಕೈದು ಗಂಟೆಗಳ ಕಾಲ ತಡವಾಗಿ ಆಗಮಿಸಿದ್ರು. ಮಧ್ಹಾಹ್ನ 3 ಗಂಟೆಗೆ ವಿಧಾನಸಭೆ ಸಿಎಂ ಕಾಲಿಟ್ಟರು. ಬೆಳಗ್ಗೆಯಿಂದ ಹೋಟೆಲ್ ತಾಜ್ ವೆಸ್ಟೆಂಡ್ ನಲ್ಲಿದ್ದ ಸಿಎಂ, ರಾಜಕೀಯ ಲೆಕ್ಕಾಚಾರದಲ್ಲಿ ಮುಳುಗಿದ್ರು. ಅವರನ್ನ ಎಂ.ಬಿ.ಪಾಟೀಲ್, ಡಿ.ಕೆ.ಶಿವಕುಮಾರ್ ಭೇಟಿ ಮಾಡಿ ಬಂದಿದ್ದರು. ತಾಜ್ ವೆಸ್ಟೆಂಡ್