ಬೆಂಗಳೂರು: ನಾನು ಇತ್ತೀಚೆಗಷ್ಟೇ ಮದುವೆಯಾಗಿದ್ದೇನೆ. ನನ್ನ ಹೆಂಡತಿ ತುಂಬಾ ಒಳ್ಳೆಯವಳು. ವಿದ್ಯಾವಂತಳಾದರು ಕಾಳಜಿ ಮಾಡುವ ಗುಣ ಅವಳಲ್ಲಿ ಇಲ್ಲ. ನಾನೇ ಯಾವುದೇ ವಿಷಯದ ಬಗ್ಗೆ ಮಾತನಾಡಿದರು ಅವಳು ಅದನ್ನು ಹಗುರವಾಗಿಯೇ ತೆಗೆದುಕೊಳ್ಳುತ್ತಾಳೆ. ಒಂದು ದಿನ ಅವಳ ಬಳಿ ನಿನಗೆ ಈ ಮದುವೆಯನ್ನು ಒತ್ತಾಯದಿಂದ ಮಾಡಿದ್ದಾರಾ…? ಆಸಕ್ತಿ ಇಲ್ವಾ ಎಂದು ಕೇಳಿದಾಗ ಮೊದಲು ಏನೂ ಹೇಳಲಿಲ್ಲ. ಕೊನೆಗೆ ಮನೆಯವರು ಅವಳನ್ನು ಎಮೋಷನಲ್ ಬ್ಲ್ಯಾಕ್ ಮೈಲ್ ಮಾಡಿ ಹಣ ತೆಗೆದುಕೊಳ್ಳುತ್ತಿದ್ದಾರೆ ಎಂದು ಗೊತ್ತಾಯಿತು ಈ ವಿಷಯ ಅವಳ ಮೇಲೆ ತೀವ್ರ ಪರಿಣಾಮ ಬೀರಿದೆ. ಹಾಗಾಗಿ ಅವಳು ಹೀಗೆಲ್ಲಾ ವರ್ತಿಸುತ್ತಿದ್ದಾಳೆ . ನಾನು ಅವಳ ಜತೆ ಇರುತ್ತೇನೆ ಎಂದು ಎಷ್ಟೇ ಭರವಸೆ ನೀಡಿದರು ಅವಳು ನನ್ನ ನಂಬುತ್ತಿಲ್ಲ ಏನು ಮಾಡಲಿ?