ಮೈಸೂರು: ಇನ್ಮುಂದೆ ನಾನು ಯಾರನ್ನಾದ್ರೂ ಹೊಗಳುವ ಮುನ್ನ ಎಚ್ಚರ ವಹಿಸುತ್ತೇನೆ. ಅವರ ಪೂರ್ವಾಪರ ತಿಳಿದು ಮಾತನಾಡುತ್ತೇನೆ. ಈ ಹಿನ್ನೆಲೆಯಲ್ಲಿ ನನ್ನನ್ನು ಪ್ರೀತಿಸುವ ಜನರ ಕ್ಷಮೆ ಕೇಳುತ್ತೇನೆ ಎಂದು ನಟ ಪ್ರಕಾಶ್ ರೈ ಅವರು ಹೇಳಿದ್ದಾರೆ. ಪ್ರಕಾಶ್ ರೈ ಹೀಗೆ ಹೇಳುವುದಕ್ಕೆ ಕಾರಣ ಕೂಡ ಇದೆ, ಉದ್ಯಮಿ ಪುತ್ರ ವಿದ್ವತ್ ಮೇಲೆ ಶಾಸಕ ಎನ್ ಎ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ ಪ್ರಕರಣ ನಡೆದ ಬಳಿಕ. ಹ್ಯಾರಿಸ್