ಟಿ.ಆರ್ ಸ್ವಾಮಿಗೆ ನೀಡಿದ್ದ ಹುದ್ದೆಯನ್ನು ಬಿಜೆಪಿ ಸರ್ಕಾರ ರದ್ದುಮಾಡಿದ್ದೇಕೆ?

ಬೆಂಗಳೂರು| pavithra| Last Modified ಭಾನುವಾರ, 25 ಆಗಸ್ಟ್ 2019 (13:36 IST)
ಬೆಂಗಳೂರು : ಟಿ.ಆರ್ ಸ್ವಾಮಿಗೆ ನೀಡಿದ್ದ ಕೆಐಎಡಿಬಿ ಮುಖ್ಯ ಎಂಜಿನಿಯರ್ ಹುದ್ದೆಯನ್ನು ರದ್ದು ಮಾಡಿದೆ ಎಂಬುದಾಗಿ ತಿಳಿದುಬಂದಿದೆ.
ಕಳೆದ ವರ್ಷ ಆಕ್ಟೋಬರ್ ನಲ್ಲಿ ಎಸಿಬಿ ದಾಳಿ ಸಂದರ್ಭದಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ಸಂಪಾದನೆ ಮಾಡಿದ್ದಾರೆ ಎಂಬ ಆರೋಪದ ಹಿನ್ನಲೆ  ಹಿಂದಿನ ಸರ್ಕಾರ ಟಿ.ಆರ್ ಸ್ವಾಮಿಯನ್ನು ಅಮಾನತು ಮಾಡಲಾಗಿತ್ತು.


ಆದರೆ ಬಿಜೆಪಿ ಸರ್ಕಾರ ರಚನೆ ಆದ ನಂತರದಲ್ಲಿ ಮತ್ತೆ ಟಿ.ಆರ್ ಸ್ವಾಮಿಗೆ ಕೆಐಎಡಿಬಿ ಮುಖ್ಯ ಎಂಜಿನಿಯರ್ ಹುದ್ದೆಯನ್ನು ನೀಡಲಾಗಿತ್ತು. ಆದರೆ ಈ ಬಗ್ಗೆ ಮಾಧ್ಯಮಗಳಲ್ಲಿ ಮತ್ತು ರಾಜಕೀಯ ವಲಯಗಳಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಈ ಹುದ್ದೆಯನ್ನು ವಾಪಸ್ ಪಡೆದಿದೆ ಎಂಬ ಮಾಹಿತಿ ತಿಳಿದುಬಂದಿದೆ.

ಇದರಲ್ಲಿ ಇನ್ನಷ್ಟು ಓದಿ :