ವಿಶ್ವವಿಖ್ಯಾತಿ ಕುಂಭಮೇಳದಲ್ಲಿ ಅಮ್ಮನವರಿಗೆ ಅಪಚಾರ ಮಾಡಲಾಗಿದೆ.ಮಹಾಲಕ್ಷ್ಮಿ ಅಮ್ಮನವರಿಗೆ ಅಪಚಾರ ಮಾಡಿರುವ ಘಟನೆ ನಡೆದಿದೆ. ಟಿ.ನರಸೀಪುರದ ತ್ರಿವೇಣಿ ಸಂಗಮದ ಗುಂಜನರಸಿಂಹ ಸ್ವಾಮಿ ದೇವಾಲಯದ ಒಳಭಾಗವಿರುವ ಮಹಾಲಕ್ಷ್ಮಿ ಅಮ್ಮನವರ ಗರ್ಭಗುಡಿಯಲ್ಲಿ ಈ ಘಟನೆ ನಡೆದಿದೆ.ಗರ್ಭಗುಡಿಗೆ ಬೀಗ ಹಾಕಿ ಅಪಚಾರವೆಸಗಿರುವ ದೇವಸ್ಥಾನದ ಅರ್ಚಕರು, ಭಕ್ತರ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ಕೇವಲ ಗರ್ಭಗುಡಿಯ ಬಾಗಿಲ ಬಳಿಯೇ ನಿಂತು ದರ್ಶನ ಪಡೆದ ಭಕ್ತಾಧಿಗಳು, ಅರ್ಚಕರ ನಡೆಗೆ ಕಿಡಿಕಾರಿದ್ದಾರೆ. ಲಕ್ಷಾಂತರ ಭಕ್ತರ ದರ್ಶನ ಭಾಗ್ಯಕ್ಕೆ ತಣ್ಣೀರೆರಚಿದ ಗುಂಜನರಸಿಂಹ ಸ್ವಾಮಿ ದೇವಸ್ಥಾನದ