ಬೆಂಗಳೂರು : ರಾಜ್ಯದ ಸಾರಿಗೆ ಇಲಾಖೆ ಅಧಿಕಾರಿಗಳು ಆನ್ಲೈನ್ ಸೇವೆಗೆ ವಿರೋಧ ವ್ಯಕ್ತಪಡಿಸುತ್ತಿದ್ದು ಪರಿಣಾಮ ಆನ್ಲೈನ್ ಸೇವೆ ನೀಡುತ್ತಿದ್ದ ವಾಹನ್ ಪೋರ್ಟಲ್ನಲ್ಲಿ 1.7 ಲಕ್ಷ ಅರ್ಜಿಗಳು ವಿಲೇವಾರಿಗೆ ಬಾಕಿ ಉಳಿದಿವೆ. ವಾಹನ್ ಪೋರ್ಟಲ್ ಯಾವುದೇ ನೇರ ಸಂಪರ್ಕವಿಲ್ಲದೆಯೇ 15 ವಾಹನ ಸಂಬಂಧಿತ ಸೇವೆಗಳನ್ನು ನೀಡುತ್ತದೆ. ಅರ್ಜಿಗಳಲ್ಲಿ ಮೋಟಾರು ವಾಹನ ತೆರಿಗೆ ಪಾವತಿ, ನೋಂದಣಿ ಪ್ರಮಾಣಪತ್ರ (ಆರ್ಸಿ) ಸರೆಂಡರ್ ಅಥವಾ ಅಮಾನತು,ಫಿಟ್ನೆಸ್ ತಪಾಸಣೆ ಅಥವಾ ಪ್ರಮಾಣಪತ್ರ, ನಕಲಿ ಆರ್ಸಿ ನೀಡಿಕೆ,