ಶ್ರಾವಣ ಮಾಸ ಬಂತು ಅಂದ್ರೆ ಎಲ್ಲರಿಗೂ ಮೊದಲು ನೆನಪಾಗೋದು ಬರುವ ಸಾಲು ಸಾಲು ಹಬ್ಬಗಳು. ಆಗಷ್ಟೇ ಸ್ವಲ್ಪ ಬಿಡುವು ಕೊಟ್ಟ ಮಳೆಯ ನಡುವೆಯೇ ಹಬ್ಬದ ಸಂಭ್ರಮ ಕಳೆಗಟ್ಟುವ ಸಂದರ್ಭ ಶ್ರಾವಣದ ಈ ತಿಂಗಳು. ಆದ್ರೆ ಕೆಲವರ ಪಾಲಿಗೆ ಶ್ರಾವಣ ಮಾಸ ಅಂದ್ರೆ ಒಂದಿಡೀ ತಿಂಗಳು ಮಾಂಸಾಹಾರ ಸೇವನೆ ಇಲ್ಲದ ತಿಂಗಳು ಎಂದೇ ಅರ್ಥ. ಈ ತಿಂಗಳು ಪೂರ್ತಿ ಸಸ್ಯಾಹಾರವನ್ನಷ್ಟೇ ಸೇವಿಸುವ ಅನೇಕರು ನಮ್ಮ ನಡುವೆಯೇ ಇದ್ದಾರೆ. ಚಿಕ್ಕಂದಿನಿಂದಲೂ ಈ ಅಭ್ಯಾಸವನ್ನು