ನಾನೇನು ಇವನಿಗೆ ಹದರಿಕೊಳ್ಳಬೇಕಾ? ನಾನು ಬ್ಯಾಲೆಟ್ ಪೇಪರ್ ಸರಿಯಾಗಿಯೇ ತೋರಿಸಿದ್ದೇನೆ. ಅವನೇನು ಕತ್ತೆ ಕಾಯ್ದಿದ್ದನಾ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಗೆ ಜೆಡಿಎಸ್ ಶಾಸಕ ಗುಬ್ಬಿ ಶ್ರೀನಿವಾಸ್ ಏಕವಚನದಲ್ಲಿ ಹರಿಹಾಯ್ದಿದ್ದಾರೆ. ರಾಜ್ಯಸಭೆಯಲ್ಲಿ ಅಡ್ಡಮತದಾನ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಗುಬ್ಬಿ ಶ್ರೀನಿವಾಸ್ ಅವ ತುಮಕೂರಿನ ವಿದ್ಯಾನಗರದ ನಿವಾಸದ ಎದುರು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಶ್ರೀನಿವಾಸ್ ಬೆಂಬಲಿಗರು ಬಂದಿದ್ದರಿಂದ ಗೊಂದಲ, ಗದ್ಧಲದ ವಾತಾವರಣ ನಿರ್ಮಾಣವಾಯಿತು. ಈ