ಬೆಂಗಳೂರು : ಸಚಿವ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಪೈಪೋಟಿ ಶುರುವಾಗಿದ್ದು, ಈ ವಿಚಾರಕ್ಕೆ ಲಿಂಗಾಯತ ಮುಖಂಡರ ಮೇಲೆ ಸಿಎಂ ಯಡಿಯೂರಪ್ಪ ಗರಂ ಆಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಈ ಘಟನೆ ಯಡಿಯೂರಪ್ಪ ಅವರ ಡಾಲರ್ಸ್ ಕಾಲೊನಿ ನಿವಾಸದಲ್ಲಿ ನಡೆದಿದೆ. ಆಗಸ್ಟ್ 8 ಅಥವಾ 10ಕ್ಕೆ ಮೊದಲ ಸಂಪುಟ ವಿಸ್ತರಣೆಯಾಗಲಿದೆ ಎಂಬ ಸುದ್ದಿ ಹರಿದಾಡುತ್ತಿರುವ ಹಿನ್ನಲೆಯಲ್ಲಿ ಪಂಚಮಸಾಲಿ ಲಿಂಗಾಯತ ಸಮುದಾಯದಿಂದ 15 ಬಿಜೆಪಿ ಶಾಸಕರು ಗೆದ್ದಿದ್ದು, ಇವರ ಪೈಕಿ 4 ಮಂದಿಗಾದರೂ ಸಂಪುಟದಲ್ಲಿ ಅವಕಾಶ