ಲವ್ ಮಾಡಿ ಮದುವೆಯಾಗಿದ್ದ ಯುವತಿಯೊಬ್ಬಳು ವರ್ಷ ಕಳೆಯುವಷ್ಟರಲ್ಲೇ ಸಾವಿನ ಮನೆ ಸೇರಿ ಹೆಣವಾಗಿದ್ದಾಳೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಹಳೆ ಸಿದ್ದರಳ್ಳಿ ಗ್ರಾಮದ ಶ್ವೇತಾ (19) ಆತ್ಮಹತ್ಯೆ ಮಾಡಿಕೊಂಡಿದ್ದು, ಪೋಷಕರಲ್ಲಿ ಸಾವಿನ ಕುರಿತು ಅನುಮಾನ ಮೂಡಿಸಿದೆ. ವಸಂತ್ ಎಂಬುವರನ್ನು ಪ್ರೀತಿಸಿ ಏಳೆಂಟು ತಿಂಗಳ ಹಿಂದಷ್ಟೇ ಶ್ವೇತಾ ಮದುವೆಯಾಗಿದ್ದಳು. ಇದೀಗ ಗಂಡನ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ವರದಕ್ಷಿಣೆಗಾಗಿ ತಮ್ಮ ಮಗಳ ಕೊಲೆ ಮಾಡಲಾಗಿದೆ ಅಂತ ಶ್ವೇತಾಳ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.