ಸಚಿವ ಡಿ.ಕೆ.ಶಿವಕುಮಾರ ಭಾವುಕರಾಗಿ ಕಣ್ಣೀರು ಹಾಕಿರುವ ಘಟನೆ ನಡೆದಿದೆ.ಸಚಿವ ದಿ. ಸಿ.ಎಸ್. ಶಿವಳ್ಳಿಯವರದ್ದು ಸರಳ, ಸಾಮಾನ್ಯ ಬದುಕು. ಗ್ರಾಪಂ, ತಾಪಂ ಸದಸ್ಯನಾದರೇ ಸಾಕು ದೊಡ್ಡ ದೊಡ್ಡ ಬಂಗಲೆಯನ್ನು ಕಟ್ಟಿ ಐಶಾರಾಮಿ ಜೀವನ ನಡೆಸುತ್ತಾರೆ. ಆದರೆ ಸಿ.ಎಸ್. ಶಿವಳ್ಳಿ ಸಚಿವರಾದರೂ ಆರ್ಥಿಕ ಮುಗ್ಗಟ್ಟಿನಿಂದ ಯರಗುಪ್ಪಿಯಲ್ಲಿ ತಾವು ವಾಸವಾಗಿದ್ದ ಹಳೆಯ ಮನೆಯನ್ನು ನವೀಕರಣ ಮಾಡಲಾಗದೇ ಇಹಲೋಕ ತ್ಯಜಿಸಿದ್ದಾರೆ.ಅಂದಹಾಗೆ, ಈ ಮನೆಯ ವಿಚಾರ ಬೆಳಕಿಗೆ ಬಂದಿದ್ದು ಸಚಿವ ಡಿ.ಕೆ. ಶಿವಕುಮಾರ ಅವರಿಂದ. ಯರಗುಪ್ಪಿಯಲ್ಲಿ ಮನೆಯೊಂದು