ಬೆಂಗಳೂರು: ನಿನ್ನೆ ಕರ್ನಾಟಕ ನವನಿರ್ಮಾಣ ಪರಿವರ್ತನಾ ಯಾತ್ರೆಗೆ ಚಾಲನೆ ನೀಡಿದ್ದ ಬಿಜೆಪಿ ನಾಯಕರು ಜನರನ್ನು ಒಟ್ಟುಗೂಡಿಸಲು ಹರಸಾಹಸ ಪಡಬೇಕಾಯಿತು. ಇದಕ್ಕೆ ಕಾರಣವೇನು ಗೊತ್ತಾ? ಅಷ್ಟಕ್ಕೂ ಅಲ್ಲಿ ಯಾಕೆ ಖಾಲಿ ಕುರ್ಚಿಗಳೇ ಹೆಚ್ಚಿತ್ತು? ಯಾಕೆ ಜನ ಅರ್ಧದಿಂದಲೇ ಎದ್ದು ಹೋಗುತ್ತಿದ್ದರು? ಇದಕ್ಕೆಲ್ಲಾ ಕಾರಣ ಬಿಸಿಲು. ಉರಿಬಿಸಿಲಿನಲ್ಲಿ ಕೂರಲು ಜನರಿಗೆ ಸರಿಯಾದ ಪೆಂಡಾಲ್ ವ್ಯವಸ್ಥೆ ಮಾಡಿರಲಿಲ್ಲ.ಹಾಗಾಗಿ ಬಿಸಿಲಿನ ತಾಪ ತಾಳಲಾರದೇ ಸಮಾವೇಷವೂ ಬೇಡ, ಭಾಷಣವೂ ಬೇಡ ಎಂದು ಜನರು ಎದ್ದು ಹೋಗುತ್ತಿದ್ದರು