ಮೈಸೂರು: ರಾಜೀನಾಮೆ ನೀಡಲು ಏನು ಆಧಾರವಿದೆ. ನಾನೇನು ತಪ್ಪು ಮಾಡಿಲ್ಲ. ಜೈಲಿಗೂ ಹೋಗಿಲ್ಲ. ಗಣಿ ಹಗರಣದಲ್ಲಿಲ್ಲ. ಬ್ಲೂಫಿಲಂ ನೋಡಿಲ್ಲ. ಮತ್ಯಾಕೆ ನಾನು ರಾಜೀನಾಮೆ ನೀಡಬೇಕು ಎಂದು ಸಚಿವ ರಮಾನಾಥ ರೈ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸೂಲಿಬೆಲೆ ಚಕ್ರವರ್ತಿ ವಿಷಯದಲ್ಲಿ ಸೂಲಿಬೆಲೆ ಎಂದು ಹೇಳಿ ಮಾತು ನಿಲ್ಲಿಸಿದ್ದೇನೆ ಅಷ್ಟೆ. ಅದರ ಹೊರತಾಗಿ ಬೇರೇನೂ ಹೇಳಿಲ್ಲ. ನನಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ನಾನು ಹೇಳದ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ.