ಈಗಿನ ಪರಿಸ್ಥಿಯಲ್ಲಿ ಖಾಸಗೀಕರಣ ಎಲ್ಲ ಕಡೆ ಇದೆ. ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಉದ್ಯೋಗ ಸಿಗಬೇಕು ಅನ್ನೊ ಬೇಡಿಕೆ ಸಾಮಾನ್ಯವಾಗಿದೆ. ಹೀಗಂತ ಮಾಜಿ ಸಚಿವ ಯು.ಟಿ.ಖಾದರ್ ಹೇಳಿಕೆ ನೀಡಿದ್ದು, ಬಂದ್ ಗೆ ನಾವು ಬೆಂಬಲ ಕೊಟ್ಟಿದ್ದೇವೆ ಎಂದಿದ್ದಾರೆ. ಸರ್ಕಾರ ಬಂದ್ ಮಾಡುವವರನ್ನು ಕರೆದು ಸಮಸ್ಯೆ ಬಗೆಹರಿಸಬೇಕು. ಆದ್ರೆ ಅವರೊಂದಿಗೆ ಮಾತನಾಡಲು ಕೂಡ ಸರ್ಕಾರ ತಯಾರಿಲ್ಲ ಎಂದು ದೂರಿದ್ದಾರೆ.ಚರ್ಚೆ ಮಾಡಿದ್ರೆ ತಾನೇ ಸಮಸ್ಯೆ ಬಗೆ ಹರಿಯೋದು? ಆದರೆ ಸರ್ಕಾರ ಚರ್ಚೆ ಮಾಡಲು ತಯಾರಿಲ್ಲ.