ಬೆಂಗಳೂರು: ಕೆಲವೊಮ್ಮೆ ಹೀಗೂ ಆಗುತ್ತದೆ. ಕೊರೋನಾ ಪಾಸಿಟಿವ್ ರೋಗಿಗಳ ಹತ್ತಿರವೇ ಇದ್ದು, ನಿಮಗೂ ಕೊರೋನಾ ಲಕ್ಷಣಗಳಿದ್ದರೂ ಪರೀಕ್ಷಿಸಿದಾಗ ವರದಿ ನೆಗೆಟಿವ್ ಬರುತ್ತದೆ. ಇದಕ್ಕೆ ಕಾರಣವೇನು ಗೊತ್ತಾ?ಕೆಲವೊಮ್ಮೆ ಆರ್ ಟಿಪಿಸಿಆರ್ ಟೆಸ್ಟ್ ಮಾಡುವಾಗ ಸರಿಯಾಗಿ ಗಂಟಲು ದ್ರವ ಮಾದರಿ ತೆಗೆದುಕೊಳ್ಳದೇ ಇದ್ದರೆ ಈ ರೀತಿಯ ಪ್ರಮಾದಗಳಾಗುತ್ತವೆ ಎನ್ನುವುದು ತಜ್ಞರ ಅಭಿಪ್ರಾಯ. ಕೆಲವೊಮ್ಮೆ ಪರೀಕ್ಷೆಗೊಳಪಟ್ಟ ಮೇಲೆ ರೋಗಗ್ರಸ್ತ ವೈರಾಣುಗಳು ಪತ್ತೆಯಾಗಬಹುದು.ಇನ್ನು ಒಮಿಕ್ರಾನ್ ಪ್ರಕರಣಗಳಲ್ಲಿ ಆರು ದಿನಗಳೊಳಗಾಗಿ ಮಾದರಿ ಸಂಗ್ರಹಿಸಿದರೆ ಕೆಲವೊಮ್ಮೆ ಸಂಪರ್ಕಿತರಲ್ಲಿ ಲಕ್ಷಣಗಳು