ಬಹು ಸಂಖ್ಯಾತರ ಅಕ್ಷರವನ್ನೇ ಕಸಿದುಕೊಂಡರು. ಶೂದ್ರರೂ ತಾವು ಉತ್ಪಾದಿಸಿದ್ದನ್ನೇ ಬಳಸದಂತೆ ಮಾಡಿದರು. ಈಗ ನಾವು ನಮ್ಮಿಂದ ಕಿತ್ತುಕೊಂಡಿದ್ದನ್ನೇ ವಾಪಸ್ ಕೇಳಿದರೆ ಸಿಟ್ಟು ಕೋಪ ಬರುತ್ತದೆ. ನಾವೇನು ಭಿಕ್ಷೆ ಬೇಡುತ್ತಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಬೆಂಗಳೂರಿನಲ್ಲಿ ಭಾನುವಾರ ನಡೆದ ನ್ಯಾಯಮೂರ್ತಿ ನಾಗಮೋಹನ ದಾಸ್ ಅವರ ಮೀಸಲಾತಿ ಭ್ರಮೆ ಮತ್ತು ವಾಸ್ತವ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಒಂದು 140-150 ಪುಟಗಳಿರುವ ಚಿಕ್ಕ ಪುಸ್ತಕ ಇದು. ಪುಸ್ತಕದಲ್ಲಿ ಚಿಕ್ಕದಾಗಿ ಚೊಕ್ಕದಾಗಿ