ಬೆಂಗಳೂರು : ಅನೈತಿಕ ಸಂಬಂಧಕ್ಕೆ ಅಡ್ಡಿಪಡಿಸಿದ ಪತಿಯನ್ನು ಪ್ರಿಯಕರನ ಜೊತೆ ಸೇರಿ ಪತ್ನಿ ಕೊಲೆ ಮಾಡಿದ ಘಟನೆ ಗುಂಡ್ಲುಪೇಟೆ ತಾಲೂಕಿನ ತೊಂಡವಾಡಿಯಲ್ಲಿ ನಡೆದಿದೆ. ನಾಗರಾಜನಾಯ್ಕ(40) ಕೊಲೆಯಾದ ಪತಿ, ಪದ್ಮಾ(26), ಮಣಿಕಂಠ(26) ಕೊಲೆ ಆರೋಪಿಗಳು. ಮಧ್ಯರಾತ್ರಿಯಲ್ಲಿ ತೊಂಡವಾಡಿ ಜಮೀನಿನೊಂದರಲ್ಲಿ ಪತ್ನಿ, ಪ್ರಿಯಕರನ ಜೊತೆ ಚಕ್ಕಂದವಾಡುತ್ತಾ ಕಾಮ ದಾಸೆ ಪೂರೈಸಿಕೊಳ್ಳುತ್ತಿದ್ದರು. ಆಗ ಪತ್ನಿಯು ಪತಿಯ ಕೈಗೆ ಸಿಕ್ಕಿಬಿದ್ದಿದ್ದಾಳೆ. ಆ ವೇಳೆ ಪತ್ನಿ ಪ್ರಿಯಕರನ ಸಹಾಯದಿಂದ ಪತಿಯನ್ನು ಕಲ್ಲಿನಿಂದ ಹೊಡೆದು ಕೊಂದು ಕಾಲುವೆಗೆ ಎಸೆದಿದ್ದಾರೆ.