ಲವ್ವರ್ ಜತೆ ಎಸ್ಕೇಪ್ ಆದ್ಲು ಖತರ್ನಾಕ್ ಹೆಂಡತಿ

ನೆಲಮಂಗಲ| Rajesh patil| Last Modified ಸೋಮವಾರ, 5 ಜೂನ್ 2017 (19:10 IST)
ಲವ್ವರ್ ಜತೆ ಎಸ್ಕೇಪ್ ಆಗುವ ಮೊದ್ಲು ಪತ್ನಿಯೊಬ್ಬಳು ಪತಿಗೆ ಲವ್ ಲೆಟರ್ ಬರೆದ ವಿಚಿತ್ರ ಘಟನೆ ವರದಿಯಾಗಿದೆ. ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಐದು ವರ್ಷದಿಂದ ವಿವಾಹವಾಗಿದ್ದ ಶ್ರೀನಿವಾಸ್ ಮತ್ತು ಜ್ಯೋತಿ ದಂಪತಿಗಳಿಗೆ ಪ್ರೀತಿಯ ಬರವಿರಲಿಲ್ಲ. ಶ್ರೀನಿವಾಸ್ ಪ್ರತಿನಿತ್ಯ ಪತ್ನಿಯ ತಲೆಬಾಚಿ, ಅಡುಗೆ ಮಾಡಿ ತಾನೇ ಕೈಯಾರೆ ತಿನ್ನಿಸುತ್ತಿದ್ದ ಎನ್ನುವುದು ಬಹಿರಂಗವಾಗಿದೆ.
ನಿನ್ನ ಬಿಟ್ಟು ಹೋಗೋಕೆ ಮನಸ್ಸಿಲ್ಲ. ಆದ್ರೂ ಹೋಗುತ್ತಿದ್ದೇನೆ. ನೀವು ನಿಮ್ಮ ಅಮ್ಮನ ಜೊತೆ ಚೆನ್ನಾಗಿರಿ. ಮುಂದೆ ಫೋನ್ ಮಾಡ್ತೇನೆ. ನಿಮ್ಮ ಮಗಳನ್ನು ನೋಡಲು ಬನ್ನಿ ಎಂದು ಪತಿಗೆ ಬರೆದ ಪತ್ರದಲ್ಲಿ ಜ್ಯೋತಿ ತಿಳಿಸಿದ್ದಾಳೆ.

ನಮ್ಮಿಬ್ಬರಿಗೆ ಆಗಿ ಬರ್ತಾ ಇಲ್ಲ. ನಾನು ನಿಮ್ಮನ್ನು ಇಷ್ಟಪಡುವಷ್ಟು ಬೇರೆ ಯಾರನ್ನು ಇಷ್ಟಪಡುವುದಿಲ್ಲ ಎಂದು ಪತ್ರ ಬರೆದ ಜ್ಯೋತಿ, ತನ್ನ ಲವರ್ ಫ್ಲಾವರ್ ಡೆಕೋರೇಟರ್ ವೃತ್ತಿಯಲ್ಲಿರುವ ನಾಗರಾಜನೊಂದಿಗೆ ಪರಾರಿಯಾಗಿದ್ದಾಳೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.
ಇದರಲ್ಲಿ ಇನ್ನಷ್ಟು ಓದಿ :