ಮೈಸೂರು: ಪ್ರಿಯಕರನ ಜೊತೆ ಸೇರಿಕೊಂಡು ಪತ್ನಿ ತನ್ನ ಪತಿಯ ಜನನಾಂಗವನ್ನೇ ಹಿಸುಕಿ ಹತ್ಯೆ ಮಾಡಿದ ನೀಚ ಕೃತ್ಯ ಮೈಸೂರಿನಲ್ಲಿ ನಡೆದಿದೆ. ಈ ಪ್ರಕರಣ ನಡೆದಿದ್ದು ಒಂಭತ್ತು ತಿಂಗಳ ಹಿಂದೆ. ಆದರೆ ಈಗ ಪೊಲೀಸ್ ತನಿಖೆಯಿಂದ ನಿಜಾಂಶ ಬಯಲಾಗಿದೆ. ಈ ಸಂಬಂಧ ಆರೋಪಿ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಲಾಗಿದೆ.ತನ್ನ ತವರು ಮನೆ ಸೇರಿಕೊಂಡಿದ್ದ ಪತ್ನಿಯನ್ನು ನೋಡಲು ಪತಿ ಬಂದಿದ್ದ. ಈ ವೇಳೆ ಆತನಿಗೆ ಕಾಫಿಯಲ್ಲಿ ಮತ್ತು ಬರಿಸುವ ಔಷಧಿ ಹಾಕಿ