ಚಿಕ್ಕಬಳ್ಳಾಪುರ : ಪ್ರತಿನಿತ್ಯ ಕುಡಿದು ಬಂದು ವಿನಾಕಾರಣ ಗಲಾಟೆ ಮಾಡ್ತಿದ್ದ ಪತಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪತ್ನಿ ಕೊಲೆ ಮಾಡಿದ್ದಾಳೆ.ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಜಕ್ಕಸಂದ್ರ ಗ್ರಾಮದಲ್ಲಿ ನಡೆದಿದೆ. ಜಕ್ಕಸಂದ್ರ ಗ್ರಾಮದ ಹನುಮಯ್ಯ(35) ಕೊಲೆಯಾದ ವ್ಯಕ್ತಿ. ಹನುಮಯ್ಯ ಪತ್ನಿ ಭಾಗ್ಯಳನ್ನು ಕುಡಿದುಬಂದು ಯಾವಾಗಲೂ ಹಿಂಸೆ ಕೊಡುತ್ತಿದ್ದ.ಇದರಿಂದ ಬೇಸತ್ತ ಭಾಗ್ಯ, ಹನುಮಯ್ಯ ಮನೆಯಲ್ಲಿ ಮಲಗಿದ ಮೇಲೆ ದೊಡ್ಡ ಸೈಜುಗಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾಳೆ.