ಕುಡಿದು ಬಂದು ವಿನಾಕಾರಣ ಜಗಳ ಮಾಡುತ್ತಿದ್ದ ಪತಿಯ ಜೀವ ತೆಗೆದಿದ್ದಾಳೆ ಪತ್ನಿ. ಕುಡಿದು ಬಂದ ನಶೆಯಲ್ಲಿ ಪತ್ನಿ ಗುಡಿಯಾ ಜೊತೆಗೆ ಗಂಡ ಚುನ್ನೂ ಜಗಳವಾಡುತ್ತಿದ್ದ. ಇದರಿಂದ ಪತ್ನಿ ಮಾತ್ರವಲ್ಲ ಮನೆಯ ಮಾಲೀಕರು ರೋಸಿ ಹೋಗಿದ್ದರು. ವಿನಾಕಾರಣ ಜಗಳವಾಡುತ್ತಿದ್ದ ವೇಳೆ ಪತಿಗೆ ಲಟ್ಟಣಿಗೆಯಿಂದ ಕುಟ್ಟಿ, ಕತ್ತು ಹಿಸುಕಿ ಪತ್ನಿ ಕೊಲೆ ಮಾಡಿದ್ದಾಳೆ. ಪತ್ನಿ ಗುಡಿಯಾಳನ್ನು ಪೊಲೀಸರು ಬಂಧನ ಮಾಡಿದ್ದಾರೆ. ನೋಯ್ಡಾದ ಜೆಜೆ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.