ಆಗಲೇ ಒಬ್ಬಾಕೆಯನ್ನ ಮದುವೆಯಾಗಿ ಎರಡು ಮಕ್ಕಳನ್ನ ಕರುಣಿಸಿ, ಮೊದಲನೇ ಹೆಂಡತಿಗೆ ಗೊತ್ತಾಗದಂತೆ ಇನ್ನೊಬ್ಬಳನ್ನ ಮದುವೆಯಾಗಿದ್ದಾನೆ. ಇನ್ನು ಎರಡನೇ ಮದುವೆ ವಿಚಾರ ಮೊದಲ ಹೆಂಡತಿಗೆ ಗೊತ್ತಾಗುತ್ತಿದ್ದಂತೆ ಆದ ಅವಾಂತರ ಅಸ್ಟಿಷ್ಟಲ್ಲ. ದಾವಣಗೆರೆ ಜಿಲ್ಲೆ ಹರಿಹರ ಸಮೀಪವಿರುವ ಕವಲೆತ್ತು ಗ್ರಾಮದಲ್ಲಿ ಮೊದಲ ಹಾಗೂ ಎರಡನೇ ಪತ್ನಿಯರಿಬ್ಬರು ಮಾರಾಮಾರಿ ಮಾಡಿಕೊಂಡಿದ್ದಾರೆ. ಕಳೆದ ಒಂಬತ್ತು ವರ್ಷದ ಹಿಂದೆ ಹರಪನಹಳ್ಳಿ ತಾಲೂಕಿನ ಪುಣಬಘಟ್ಟ ಗ್ರಾಮದ ಭಾಗ್ಯ ಹಾಗೂ ವಸಂತ್ ಎಂಬುವರು ಪ್ರೀತಿಸಿ ಮದುವೆಯಾಗಿದ್ದಾರೆ. ಈ ವೇಳೆ ಸುಖ ಸಂಸಾರ