Widgets Magazine

ಪತ್ನಿ ಆತ್ಮಹತ್ಯೆ ಕೇಸ್: ಬಾಹುಬಲಿ ಚಿತ್ರನಟ ಅಂದರ್

ಹೈದರಾಬಾದ್| Jagadeesh| Last Modified ಗುರುವಾರ, 8 ಆಗಸ್ಟ್ 2019 (14:41 IST)
ಪತ್ನಿ ಆತ್ಮಹತ್ಯೆ ಮಾಡಿಕೊಂಡಿರೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಾಹುಬಲಿ ಚಿತ್ರನಟನನ್ನ ಮಾಡಿದ್ದಾರೆ.

ನಟ ಮಧುಪ್ರಕಾಶ್ ಅವರ ಪತ್ನಿ ಭಾರತಿ ಆತ್ಮಹತ್ಯೆಗೆ ಶರಣಾಗಿದ್ದರು. ಈ ಘಟನೆ ಕುರಿತು ಭಾರತಿ ತಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹೀಗಾಗಿ ಬಾಹುಬಲಿ ಚಿತ್ರದಲ್ಲಿ ನಟನೆ ಮಾಡಿದ್ದ ಮಧು ಪ್ರಕಾಶ್ ಬಂಧನವಾಗಿದೆ.

ನನ್ನ ಮಗಳು ಭಾರತಿ ಸಾವಿಗೆ ಮಧು ಪ್ರಕಾಶ್ ಕಾರಣ ಅಂತ ದೂರು ನೀಡಲಾಗಿದೆ. ಭಾರತಿ ಮೇಲೆ ಕೌಟುಂಬಿಕ ದೌರ್ಜನ್ಯ ನಡೆಯುತ್ತಿತ್ತು ಎಂದೂ ದೂರಲಾಗಿದೆ.

ವರದಕ್ಷಿಣೆ ಸಾವು ಕಲಂ ಅಡಿ ಕೇಸ್ ದಾಖಲು ಮಾಡಿಕೊಂಡಿರೋ ಪೊಲೀಸರು ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :