Widgets Magazine

ಪತಿಯ ಕಾಮದ ಚಪಲಕ್ಕೆ ಪತ್ನಿಗೆ ಬೆಂಕಿ ಇಡೋದಾ

ಭುವನೇಶ್ವರ| JK| Last Modified ಶನಿವಾರ, 29 ಫೆಬ್ರವರಿ 2020 (20:00 IST)

ಮದುವೆಯಾಗಿ ಹೆಂಡತಿಯಿದ್ದರೂ ಕಾಮದ ಚಪಲಕ್ಕೆ ಬಿದ್ದಿದ್ದ ಪತಿಯೊಬ್ಬ ಬೇರೊಬ್ಬಳ ಜೊತೆಗಿನ ಅಕ್ರಮ ಸಂಬಂಧದಿಂದಾಗಿ ಪತ್ನಿಗೆ ಬೆಂಕಿ ಹಚ್ಚಿದ್ದಾನೆ.
 

ಪತಿ ಹಾಗೂ ಪತ್ನಿ ಅನ್ಯೋನ್ಯವಾಗಿದ್ದರು. ಇವರ ನಡುವೆ ಬಂದವಳೇ ಒಬ್ಬಳು. ಅವಳ ಜೊತೆಗೆ ಪತಿ ಹೊಂದಿದ್ದನು. ಈ ವಿಷಯ ಪತ್ನಿಗೂ ಗೊತ್ತಾಗಿದೆ.

ಅಕ್ರಮ ಹಾಗೂ ಅನೈತಿಕ ಸಂಬಂಧ ನಿಲ್ಲಿಸುವಂತೆ ಪತ್ನಿ ತನ್ನ ಪತಿಗೆ ಹೇಳುತ್ತಲೇ ಬಂದಿದ್ದಾಳೆ. ಆದರೆ ಇದಕ್ಕೆ ಒಪ್ಪದ ಪತಿರಾಯ ತನ್ನ ಪತ್ನಿಗೆ ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದಾನೆ.

ಬೆಂಕಿಯಿಂದ ಸುಟ್ಟು ಕಲಕಲಾಗುತ್ತಿದ್ದ ಪತ್ನಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದು, ಆಕೆ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾಳೆ. ಓಡಿಸ್ಸಾದ ಜಾಜ್ ಪುರ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಪರಾರಿಯಾಗಿರೋ ಪತಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

 

 

ಇದರಲ್ಲಿ ಇನ್ನಷ್ಟು ಓದಿ :