ಪತ್ನಿ ಶೀಲದ ಮೇಲೆ ಶಂಕೆ : ಮಾವನನ್ನೇ ಕೊಂದ ಅಳಿಯ

ಮೈಸೂರು| Jagadeesh| Last Modified ಬುಧವಾರ, 12 ಫೆಬ್ರವರಿ 2020 (14:27 IST)

ಪತ್ನಿಯ ಶೀಲದ ಮೇಲೆ ಸದಾ ಸಂಶಯ ಪಡುತ್ತಿದ್ದ ಅಳಿಯನೊಬ್ಬ ತನಗೆ ಹೆಣ್ಣು ಕೊಟ್ಟ ಮಾವನನ್ನೇ ಕೊಲೆ ಮಾಡಿದ್ದಾನೆ.

 

ನದೀಂ ಅಹ್ಮದ್ ಖಾನ್ ಕೊಲೆ ಮಾಡಿರೋ ಪಾಪಿ ಅಳಿಯನಾಗಿದ್ದರೆ, ಸಲೀಂ ಚಾಕು ಇರಿತದಿಂದ ಕೊಲೆಯಾಗಿರೋ ಮಾವನಾಗಿದ್ದಾನೆ.

ಸಲೀಂನ ಮಗಳನ್ನು ಆರೋಪಿ ನದೀಂ ಅಹ್ಮದ್ ಖಾನ್ ಮದುವೆಯಾಗಿದ್ದನು. ಆದರೆ ಹೆಂಡತಿ ಶೀಲದ ಮೇಲೆ ಸದಾ ಅನುಮಾನ ಪಡುತ್ತಿದ್ದನು. ಹಲವು ಬಾರಿ ಮಾವ ಇವರಿಬ್ಬರ ಜಗಳ ಬಿಡಿಸಿದ್ದನು.

ಪತ್ನಿ ಹಸೀನಾಳನ್ನು ಕೊಲ್ಲೋಕೆ ಅಂತ ನದೀಂ ಮುಂದಾಗಿದ್ದಾನೆ. ಆಗ ಮಾವ ಅಡ್ಡ ಬಂದ ಪರಿಣಾಮ ಕೊಲೆಯಾಗಿ ಹೋಗಿದ್ದಾನೆ.

ಮೈಸೂರಿನಲ್ಲಿ ಘಟನೆ ನಡೆದಿದ್ದು, ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

 

 

ಇದರಲ್ಲಿ ಇನ್ನಷ್ಟು ಓದಿ :