ಪತ್ನಿ ಅಂದ್ರೆ ಹೀಗಿರಬೇಕು: ಪತಿ ಅಂಬರೀಶ್‌ಗೆ ವಿಸ್ಕಿ ಬಾಟಲ್ ಇಟ್ಟು ಪೂಜಿಸಿದ ಸುಮಲತಾ

bangalore, ಮಂಗಳವಾರ, 29 ಜನವರಿ 2019 (17:29 IST)

ದಿವಂಗತರಾದವರಿಗೆ ಇಷ್ಟವಾದ ವಸ್ತು, ಆಹಾರವಿಟ್ಟು ಪೂಜಿಸುವುದು ವಾಡಿಕೆ. ಆದರೆ, ಜನಸಾಮಾನ್ಯರು ಇಹಲೋಕ ತ್ಯಜಿಸಿದಾಗ ಅವರಿಗೆ ಯಾವ ರೀತಿ ವಸ್ತುಗಳನ್ನು ಇಟ್ಟು ದಿನ ಮಾಡಿದರೆ ಹೆಚ್ಚು ಸುದ್ದಿಯಾಗುವುದಿಲ್ಲ. ಆದರೆ, ಗಣ್ಯ ವ್ಯಕ್ತಿಗಳು ದಿವಂಗತರಾದಾಗ ಏನು ನಡೆಯುತ್ತದೆ ಎನ್ನುವ ಕುತೂಹಲ ಎಲ್ಲರಲ್ಲಿ ಇರುತ್ತದೆ.
ನಟಿ ಸುಮಲತಾ ಬಗ್ಗೆ ಹೆಚ್ಚಿನ ವಿವರಣೆ ಅಗತ್ಯವಿಲ್ಲ. ಒಂದು ಕಾಲಕ್ಕೆ ಪಂಚಭಾಷೆ ತಾರೆಯಾಗಿ ಮಿಂಚಿ ಖ್ಯಾತ ನಟಿಯಾಗಿದ್ದವರು. ಪತಿ ಅಂಬರೀಷ್ ಖ್ಯಾತ ನಟ, ರಾಜಕಾರಣಿ, ಕೇಂದ್ರ ಸಚಿವ ಸೇರಿದಂತೆ ಅನೇಕ ಹುದ್ದೆಗಳಲ್ಲಿ ಮಿಂಚಿ ರಾಜ್ಯದಾದ್ಯಂತ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದವರು.
 
ಕಳೆದ ಕೆಲ ವರ್ಷಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಅಂಬರೀಶ್ ಕೊನೆಗೆ ಇಹಲೋಕ ತ್ಯಜಿಸಿದರು. ಪತಿಯ ಅಗಲುವಿಕೆಯನ್ನು ಸಹಿಸದ ಸುಮಲತಾ ಪತಿಗೆ ಇಷ್ಟವಾದ ಮದ್ಯದ ಬಾಟಲಿ, ನೀರಿನ ಬಾಟಲಿ, ಆಹಾರವನ್ನು ಅಂಬರೀಷ್ ಫೋಟೋ ಮುಂದಿಟ್ಟು ಪೂಜಿಸಿದ್ದಾರೆ.   
 
ಪತಿ ಅಂಬರೀಶ್ ಫೋಟೋ ಮುಂದೆ ಮದ್ಯದ ಬಾಟಲಿ ಇಟ್ಟು ಸುಮಲತಾ ತೆಗೆಸಿಕೊಂಡ ಫೋಟೋ ಇದೀಗ ವೈರಲ್ ಆಗಿದೆ. ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್, ಟ್ವಿಟ್ಟರ್, ವಾಟ್ಸಪ್‌‌ಗಳಲ್ಲಿ ಪ್ರಮುಖ ಹಾಟ್ ಸುದ್ದಿಯಾಗಿ ಹೊರಹೊಮ್ಮಿದೆ. ಪತಿಯ ನಿಧನದ ನಂತರ ಅವರಿಗೆ ಇಷ್ಟವಾದ ವಸ್ತುಗಳನ್ನು ಇಟ್ಟು ಪೂಜಿಸುವುದು ಸಂಪ್ರದಾಯವಾಗಿದೆ. ಆದರೆ, ಜನಪ್ರತಿನಿಧಿಯಾಗಿದ್ದ ಮಾಜಿ ಸಚಿವ ಅಂಬರೀಷ್ ಇತರ ಜನರಿಗೆ ಮಾದರಿಯಾಗುವಂತೆ ಇರಬೇಕು ಎನ್ನುವುದು ಜನತೆಯ ಅಭಿಪ್ರಾಯವಾಗಿದೆ. ಇಂತಹ ಸಂದರ್ಭದಲ್ಲಿ ಪತಿ ಅಂಬರೀಶ್‌ಗೆ ಮದ್ಯದ ಬಾಟಲಿಯಿಟ್ಟು ಪೂಜಿಸಿದ ಸುಮಲತಾ ಕಾರ್ಯ ಇದೀಗ ವಿವಾದಕ್ಕೆ ಕಾರಣವಾಗಿದೆ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ವರ್ತಕನ ತಲೆ ಸೇರಿದ್ದ ಬುಲೆಟ್ ಹೊರಕ್ಕೆ!

ಚಿನ್ನಾಭರಣ ಅಂಗಡಿ ಮಾಲೀಕನ ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ತಕನ ತಲೆಯಲ್ಲಿಯೇ ...

news

ಪಿಡಿಒನನ್ನು ಥಳಿಸಿದ ಗ್ರಾಮ‌ ಪಂಚಾಯತ್ ಮಹಿಳಾ ಸದಸ್ಯರು!

ಪಿಡಿಒ ಮೇಲೆ ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯೆಯರು ಹಲ್ಲೆ ನಡೆಸಿರುವ ಘಟನೆ ನಡೆದಿದೆ.

news

ಸಿದ್ದರಾಮಯ್ಯ ಮಹಿಳೆ ಜತೆ ಅಸಭ್ಯ ವರ್ತನೆಗೆ ರಾಮುಲು ಗರಂ

ಮಾಜಿ ಸಿಎಂ ಸಿದ್ದರಾಮಯ್ಯ ಮಹಿಳೆಯೊಂದಿಗೆ ಅಸಭ್ಯ ವರ್ತನೆ ತೋರಿರುವ ಘಟನೆಗೆ ಬಿಜೆಪಿಯ ಶ್ರೀ ರಾಮುಲು ಗರಂ ...

news

ಮತ್ತೆ ಶುರುವಾಗಿದೆಯಾ ಕಾಂಗ್ರೆಸ್ ಜಟಾಪಟಿ?

ಮತ್ತೆ ಶುರುವಾಗಿದೆಯಾ ಕಾಂಗ್ರೆಸ್ ಜಟಾಪಟಿ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.