ಬೆಂಗಳೂರು: ಕೇವಲ 12 ಗುಂಟೆ ಜಮೀನಿಗಾಗಿ ಮಗನ ಜೊತೆ ಸೇರಿಕೊಂಡು ಪತ್ನಿಯೇ ಪತಿಯನ್ನು ಕೊಂದ ಘಟನೆ ನಡೆದಿದೆ.12 ಗುಂಟೆ ಜಮೀನನ್ನು ಪುತ್ರನ ಹೆಸರಿಗೆ ಬರೆದುಕೊಡಲು ಪತಿ ನಿರಾಕರಿಸಿದ್ದಕ್ಕೆ ಪತ್ನಿ ಪುತ್ರನ ಜೊತೆ ಸೇರಿಕೊಂಡು ಸಹಾಯಕರಿಂದ ಕೊಲೆ ಮಾಡಿಸಿದ್ದಾರೆ. ಈ ಸಂಬಂಧ ಪತ್ನಿ, ಪುತ್ರ ಹಾಗೂ ಇತರರನ್ನು ಪೊಲೀಸರು ಬಂಧಿಸಿದ್ದಾರೆ.ಪತ್ನಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರೆ, ಪುತ್ರನೂ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದ. ಪತಿ ಈಗಾಗಲೇ ಮಹಿಳೆಯಿಂದ ದೂರವಾಗಿದ್ದು ಇನ್ನೊಂದು ಮದುವೆಯಾಗಿದ್ದ.