ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ ಈಗ ಮೊದಲಿನಷ್ಟು ಸಸ್ಯರಾಶಿ ಉಳಿದಿಲ್ಲ. ಆದರೆ, ಬೆಂಗಳೂರು ಸಮೀಪವೇ ಒಂದು ಅದ್ಬುತ ಪರಿಸರವಿದೆ. ಅದುವೇ ಬನ್ನೇರುಘಟ್ಟ ನ್ಯಾಶನಲ್ ಪಾರ್ಕ್. ಒಂದು ದಿನದ ಟ್ರಪ್`ಗೆ ಹೇಳಿ ಮಾಡಿಸಿದ ಜಾಗ. ಕುಟುಂಬ ಸಮೇತ ಕಾಲ ಕಳೆಯಬಹುದಾದ ಬೆಂಗಳೂರಿಗೆ ಹತ್ತಿರದ ಪ್ರವಾಸಿ ತಾಣ ಬನ್ನೇರುಘಟ್ಟ ನ್ಯಾಶನಲ್ ಪಾರ್ಕ್. ಟೈಗರ್ ಮತ್ತು ಲಯನ್ ಸಫಾರಿ ಸಹ ಇಲ್ಲಿದ್ದು, ನಿಗದಿತ ಹಣ ಕೊಟ್ಟು ಟಿಕೆಟ್ ಖರೀದಿಸಿದವರನ್ನ ಸುರಕ್ಷಿತ ಬಸ್ಸುಗಳಲ್ಲಿ ಕಾಡುಗಳ ಒಳಗೆ ಕರೆದೊಯ್ದು