ಬೆಳಗಾವಿ : ಚುನಾವಣೆ ಬಂದ್ರೇ ಸಾಕು ಬೆಳಗಾವಿ ಜಿಲ್ಲೆಯ ರಾಜಕೀಯ ಚಿತ್ರಣವೇ ಬದಲಾಗಿ ಹೋಗುತ್ತೆ.2023ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಗೆ ಒಂದು ಕಡೆ ಭರ್ಜರಿ ತಯಾರಿ ನಡೆದಿದ್ರೆ, ಇನ್ನೊಂದು ಕಡೆ ಬೇರೆ ಬೇರೆ ಪಕ್ಷಗಳಿಂದ ನಾಯಕರನ್ನ ಸೆಳೆಯುವ ಕಸರತ್ತು ಕೂಡ ಜೋರಾಗಿದೆ.ರಮೇಶ್ ಜಾರಕಿಹೊಳಿ ಪಕ್ಷ ಬಿಡ್ತಾರೆ ಅನ್ನೋ ಸುದ್ದಿ ಜೋರಾಗಿ ಹರಡಿದ್ರೆ, ಇತ್ತ ಕಾಂಗ್ರೆಸ್-ಜೆಡಿಎಸ್ ನಾಯಕರು ಪಕ್ಷಾಂತರ ಪರ್ವದ ಬಗ್ಗೆ ಕೊಟ್ಟ ಕೌಂಟರ್ ಕೂಡ ಅಷ್ಟೇ ಕುತೂಹಲಕಾರಿಯಾಗಿದೆ.