ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡದೇ ಟೀಕೆಗೆ ಗುರಿಯಾಗಿದ್ದ ಮೊಹಕ ತಾರೆ ರಮ್ಯಾ, ಮಂಡ್ಯ ನಗರಸಭೆ ಚುನವಣೆಯಲ್ಲಾದ್ರೂ ಮತದಾನ ಮಾಡೋದಕ್ಕೆ ಬರ್ತಾರಾ? ಅನ್ನೋ ಚರ್ಚೆ ಆರಂಭವಾಗಿದೆ.2013ರ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಸೋತ ಬಳಿಕ ಆರಂಭದಲ್ಲಿ ಆಗೊಮ್ಮೆ, ಈಗೊಮ್ಮೆ ಮಂಡ್ಯಕ್ಕೆ ಬರ್ತಿದ್ದ ಮಾಜಿ ಸಂಸದೆ ರಮ್ಯಾ, ಬಳಿಕ ಮಂಡ್ಯದತ್ತ ತಿರುಗಿಯೂ ನೋಡಲಿಲ್ಲ. ಜೊತೆಗೆ ಕಳೆದು ವಿಧಾನಸಭಾ ಚುನಾವಣೆಯಲ್ಲಾದ್ರೂ ಪ್ರಚಾರಕ್ಕೆ ಬರ್ತಾರೆ ಅಂತ ಮಂಡ್ಯ ಕಾಂಗ್ರೆಸ್ ಮುಖಂಡ್ರು ನಿರೀಕ್ಷಿಸಿದ್ರು. ಆದ್ರೆ ಪ್ರಚಾರಕ್ಕೆ ಇರಲಿ