ಬೆಂಗಳೂರು: ಅಕ್ರಮ ಆಸ್ಥಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಎಐಎಡಿಎಂಕೆ ಮಾಜಿ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಪರೋಲ್ ಗೆ ಅರ್ಜಿ ಸಲ್ಲಿಸಿದ್ದಾರೆ.ಅನಾರೋಗ್ಯಕ್ಕೊಳಗಾಗಿರುವ ತಮ್ಮ ಪತಿ ನಟರಾಜನ್ ಭೇಟಿಗೆ ಅನುವು ಮಾಡಿಕೊಡಲು 15 ದಿನಗಳ ಪರೋಲ್ ನೀಡುವಂತೆ ಶಶಿಕಲಾ ಕರ್ನಾಟಕ ಬಂಧೀಖಾನೆ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.ನಟರಾಜನ್ ಸದ್ಯಕ್ಕೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರನ್ನು ಭೇಟಿ ಮಾಡಲು ಅವಕಾಶ