ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತಾರಾ ಸಿದ್ದರಾಮಯ್ಯ?

ಬೆಂಗಳೂರು| pavithra| Last Modified ಭಾನುವಾರ, 15 ಡಿಸೆಂಬರ್ 2019 (11:27 IST)
ಬೆಂಗಳೂರು : ಉಪಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲನುಭವಿಸಿದ ಹಿನ್ನಲೆಯಲ್ಲಿ ವಿಪಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಈಗ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂಬುದಾಗಿ  ತಿಳಿದುಬಂದಿದೆ.ಹೃದಯ ಸಂಬಂಧಿ ಸಮಸ್ಯೆಯಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದರಾಮಯ್ಯ ಅವರನ್ನು ಆಪ್ತರು ಭೇಟಿ ಮಾಡಿ ವಿಪಕ್ಷ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ಹಿಂಡೆಯುವಂತೆ ಒತ್ತಾಯಿಸಿದ್ದಾರಂತೆ. ಇದಕ್ಕೆ ಸಿದ್ದರಾಮಯ್ಯ, ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಾಸು ಪಡೆಯಲ್ಲ ಎಂದಿದ್ದಾರಂತೆ.


ಅಷ್ಟೇ ಅಲ್ಲದೇ ನಾನು ಒಂದು ಹೆಜ್ಜೆ ಮುಂದೆ ಹೋಗಿ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವ ಬಗ್ಗೆ ಯೋಚಿಸುತ್ತಿದ್ದೇನೆ . ರಾಜಕೀಯಕ್ಕೆ ನಾನು ಅನಿವಾರ್ಯವಲ್ಲ. ನಾನು ಇಲ್ಲದಿದ್ದರೂ ರಾಜಕಾರಣ ಇದ್ದೇ ಇರುತ್ತದೆ ಎಂದು ಹೇಳಿದ್ದಾರಂತೆ.ಇದರಲ್ಲಿ ಇನ್ನಷ್ಟು ಓದಿ :