ದೇಶದ ಸಾಫ್ಟ್ವೇರ್ ಕ್ಷೇತ್ರದಲ್ಲಿ ದಿಗ್ಗಜ ಕಂಪೆನಿಯಾದ ವಿಪ್ರೋ ಸಂಸ್ಥೆಗೆ ಬೆದರಿಕೆಯ ಇ-ಮೇಲ್ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 500 ಕೋಟಿ ರೂಪಾಯಿ ಹಣವನ್ನು ನೀಡದಿದ್ದಲ್ಲಿ ಕಂಪೆನಿಯ ನೌಕರರನ್ನು ಹತ್ಯೆ ಮಾಡುವುದಾಗಿ ಇ-ಮೇಲ್ನಲ್ಲಿ ಬೆದರಿಕೆ ಹಾಕಲಾಗಿದೆ. ದ್ರೋಣ್ ಕ್ಯಾಮರಾ ಮೂಲಕ ರಿಸಿನ್ ಎನ್ನುವ ವಿಷವನ್ನು ಸಿಂಪಡಿಸಿ ನೌಕರರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. 500 ಕೋಟಿ ರೂಪಾಯಿ ಹಣವನ್ನು ಬಟನ್ಕಾಯಿನ್ ಮೂಲಕ ವರ್ಗಾಯಿಸುವಂತೆ ಕೂಡಾ ಇ-ಮೇಲ್ನಲ್ಲಿ ತಿಳಿಸಲಾಗಿದೆ.