ಯಾದಗಿರಿ : ಇಂದು ಕಕ್ಕೇರಾ ಪುರಸಭೆಗೆ ಮತದಾನ ಹಿನ್ನೆಲೆ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಬಾನಾಮತಿ ಮಾಟ-ಮಂತ್ರದ ಮೊರೆ ಹೋಗಿದ್ದಾರೆ.ಚುನಾವಣೆಯಲ್ಲಿ ಗೆಲ್ಲಲು ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಅಡ್ಡದಾರಿ ಹಿಡಿದಿರುವ ಆರೋಪ ಕೇಳಿಬಂದಿದೆ.ಕಕ್ಕೇರಾ ಪುರಸಭೆಯ 23 ನೇ ವಾರ್ಡ್ ನ ಜಂಗಣ್ಣರದೊಡ್ಡಿಯಲ್ಲಿ ಮಾಟ-ಮಂತ್ರ ಸದ್ದು ಕೇಳಿಬಂದಿದ್ದು, ಮತಗಟ್ಟೆಯ ಬಳಿ ನಿಂಬೆಹಣ್ಣು ಇತರೆ ಮಾಟ-ಮಂತ್ರದ ವಸ್ತುಗಳು ಪತ್ತೆಯಾಗಿವೆ.ಇಂದು ಮತದಾನದ ಹಿನ್ನೆಲೆ ನಿನ್ನೆ ರಾತ್ರಿಯೇ ಕೆಲವು ಕೀಡಿಗೇಡಿಗಳು ಬಾನಾಮತಿ ಮಾಟ-ಮಂತ್ರ ಮಾಡಿದ್ದಾರೆ. ಮಾಟದ ವಸ್ತುಗಳನ್ನು