ಉಡುಪಿ: ಉಡುಪಿ ಜಿಲ್ಲೆಯನ್ನು 2018 ಅಕ್ಟೋಬರ್ 2ರ ಒಳಗಾಗಿ ತ್ಯಾಜ್ಯ ಮುಕ್ತ ಜಿಲ್ಲೆಯನ್ನಾಗಿಸಬೇಕೆಂದು ಉಡುಪಿ ಜಿಲ್ಲಾಡಳಿತ ಘನ ಹಾಗೂ ದ್ರವ ಸಂಪನ್ಮೂಲ ನಿರ್ವಹಣೆ (ಎಸ್ ಎಲ್.ಆರ್.ಎಂ) ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಉಡುಪಿಯಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು ಇದರ ಉದ್ದೇಶವಾಗಿತ್ತು. ಈಗ ಪ್ಲಾಸ್ಟಿಕ್ ಎಲ್ಲರ ಅವಿಭಾಜ್ಯ ಅಂಗವಾಗಿದೆ. ಏನೇ ಕೊಳ್ಳಲು ಹೋದರು ಪ್ಲಾಸ್ಟಿಕ್ ಇಲ್ಲದೇ ವಾಪಾಸ್ ಬರುವುದಿಲ್ಲ. ಆದರೆ ಇಲ್ಲೊಂದು ವಿಶೇಷ ಮದುವೆ ನಡೆದಿದೆ. ಅದೇನಪ್ಪಾ ಅಂದರೆ ಕುಂದಾಪುರ ತಾಲೂಕಿನಲ್ಲಿ ಒಂದು