ಮಾಜಿ ಸಂಸದ ಎಚ್.ವಿಶ್ವನಾಥ್ ಪಕ್ಷ ತೊರೆದ್ರೆ ಕಾಂಗ್ರೆಸ್ ಪಕ್ಷವೇನು ಸಾಯಿವುದಿಲ್ಲ ಎಂದು ಸಚಿವ ವಿನಯ್ ಕುಲ್ಕರ್ಣಿ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಸಮುದ್ರವಿದ್ದಂತೆ, ಬರುವವರು ಬರುತ್ತಾರೆ, ಹೋಗುವವರು ಹೋಗುತ್ತಾ ಇರುತ್ತಾರೆ. ವಿಶ್ವನಾಥ್ ಪಕ್ಷದಲ್ಲಿ ಇದ್ದರೆಷ್ಟು? ಬಿಟ್ಟರೆಷ್ಟು? ಎಂದು ವಾಗ್ದಾಳಿ ನಡೆಸಿದ್ದಾರೆ. ಇಂಥಹವರು ಹಲವರಿದ್ದರು ಅವರೆಲ್ಲಾ ಪಕ್ಷ ಬಿಟ್ಟಿದ್ದಾರೆ. ಯಾರು ಪಕ್ಷ ಬಿಟ್ಟರೂ ಕಾಂಗ್ರೆಸ್ ಪಕ್ಷ ಮುಂದೆ ಹೋಗುತ್ತಿರುತ್ತದೆ. ನಾನೇ ಎಲ್ಲಾ ಅನ್ನುವವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಸ್ಥಾನವಿರುವುದಿಲ್ಲ ಎಂದು ತಿರುಗೇಟು