ಬೆಂಗಳೂರು : ಸ್ಪಾ ಮತ್ತು ಸೆಲೂನ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ನಾಗಾಲ್ಯಾಂಡ್ ನ ಮಹಿಳೆಯೊಬ್ಬಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕ್ಯಾಟಿ ರೂಡಿ ಬಂಧಿತ ಮಹಿಳೆಯಾಗಿದ್ದು, ಈಕೆ ತಿಲಕ್ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮಾರೇನಹಳ್ಳಿಯಲ್ಲಿ ವಂಡರ್ಸ್ ಸ್ಪಾ ಆ್ಯಂಡ್ ಸಲೂನ್ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಳು. ಹೊರ ರಾಜ್ಯದ ಯುವತಿಯರನ್ನು ನಗರಕ್ಕೆ ಕರೆತರುತ್ತಿದ್ದ ಮಹಿಳೆ ಹೆಚ್ಚು ದುಡ್ಡು ಮಾಡುವ ಆಸೆ ತೋರಿಸಿ ವೇಶ್ಯಾವಾಟಿಕೆಗೆ ಇಳಿಸುತ್ತಿದ್ದಳು. ಈ ಬಗ್ಗೆ ಖಚಿತ ಮಾಹಿತಿ ಪಡೆದ