ಗಂಡು ಶಿಶುವನ್ನು ಐದು ಸಾವಿರ ಹಣ ನೀಡಿ ಖರೀದಿ ಮಾಡಿದ್ದ ಮಹಿಳೆಯೊಬ್ಬಳು ಇದೀಗ ಪೊಲೀಸರ ಅತಿಥಿಯಾದ ಘಟನೆ ಬಿಸಿಲೂರಿನಲ್ಲಿ ನಡೆದಿದೆ.ಕಲಬುರಗಿ ನಗರದಲ್ಲಿ ನವಜಾತ ಗಂಡು ಶಿಶು ಖರೀದಿಸಿದ ಮಹಿಳೆಯೊಬ್ಬಳನ್ನು ಬಂಧಿಸಿರುವ ಪೊಲೀಸರು, ಶಿಶುವನ್ನು ಪುನಃ ತಾಯಿಗೆ ಒಪ್ಪಿಸಿರುವ ಪ್ರಕರಣ ನಡೆದಿದೆ.ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನರಿಬೋಳ ಗ್ರಾಮದ ರಜೀಯಾಬೇಗಂ ಎಂಬ ಮಹಿಳೆ ಕೆಲವು ದಿನಗಳ ಹಿಂದೆ ಕಲಬುರಗಿ ನಗರದ ಜಿಲ್ಲಾಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ಮಗುವನ್ನು ಕಲಬುರಗಿಯ