ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ತಮಿಳುನಾಡು ಮೂಲದ ಉದ್ಯಮಪತಿಗೆ ಸೇರಿದ್ದ ಕೆ.ಪಿ.ಎನ್ ಟ್ರಾವೆಲ್ಸ್ನ 42 ಬಸ್ಗಳಿಗೆ ಬೆಂಕಿ ಹಚ್ಚಿದ ಆರೋಪದ ಮೇಲೆ ಬಂಧಿತಳಾಗಿರುವ ಯಾದಗಿರಿ ಮೂಲದ ಯುವತಿ ನೀಡಿರುವ ಹೇಳಿಕೆ ನಿಮ್ಮನ್ನು ಒಂದು ಕ್ಷಣ ಆಘಾತಕ್ಕೆ ದೂಡದೇ ಬಿಡದು. ಸೆಪ್ಟೆಂಬರ್ 12 ರ ಘಟನೆಗೆ ಸಂಬಂಧಿಸಿದಂತೆ ಬಂಧನಕ್ಕೊಳಪಟ್ಟಿರುವ 11 ಜನರಲ್ಲಿ ಒಬ್ಬಳಾಗಿರುವ ಸಿ. ಭಾಗ್ಯಳಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡರೆ 100 ರೂಪಾಯಿ ಮತ್ತು ಒಂದು ಪ್ಲೇಟ್