ಕುಡಿದ ಮತ್ತಲ್ಲಿ ಮಹಿಳೆಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಮಾಜಿ ಶಾಸಕರ ಆಪ್ತನೊಬ್ಬನಿಗೆ ಮಹಿಳೆಯರೇ ಗೂಸಾ ನೀಡಿದ ಘಟನೆ ವರದಿಯಾಗಿದೆ. ಚಿಕ್ಕೋಡಿ ತಾಲೂಕಿನ ಹಾರುರಗೇರಿ ಪಟ್ಟಣದ ದಾಸರ ಕಾಲೋನಿಯಲ್ಲಿ ಘಟನೆ ನಡೆದಿದೆ. ಕಾಂಗ್ರೆಸ್ ನಾಯಕ ರಾಜು ಕುರಿ ಎಂಬಾತ ರಾತ್ರಿ ಹೊತ್ತು ಮದ್ಯ ಸೇವಿಸಿ ಮಹಿಳೆಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಮಾರನೇ ದಿನ ಆತನ ವರ್ತನೆಯ ಬಗ್ಗೆ ಮಹಿಳೆಯರು ಕೇಳಲು ಹೋದಾಗ ಮತ್ತೆ ಅಸಭ್ಯ ಪದಗಳನ್ನು ಬಳಸಿದ್ದಾನೆ ಎನ್ನಲಾಗಿದೆ.