ಬೆಂಗಳೂರಿನ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮಹಿಳೆಯ ಮೃತ ದೇಹ ಪತ್ತೆಯಾಗಿದೆ. ನಿಹಾರಿಕಾ ಮೃತ ಪಟ್ಟ ಮಹಿಳೆಯಾಗಿದ್ದಾಳೆ. ಈಕೆಯದ್ದು ಸಹಜ ಸಾವಲ್ಲ, ಆಕೆಯ ಪತಿ ಈಕೆಯನ್ನು ಕೊಲೆ ಮಾಡಿದ್ದಾನೆ ಎಂದು ನಿಹಾರಿಕಾಳ ಪೋಷಕರು ಆರೋಪ ಮಾಡ್ತಿದ್ದಾರೆ. ನಿಹಾರಿಕಾಳ ಪತಿ ಕಾರ್ತಿಕ ಕೊಲೆ ಮಾಡಿದ್ದಾನೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ. 4 ತಿಂಗಳ ಹಿಂದೆ ನಿಹಾರಿಕ ಕಾರ್ತಿಕನನ್ನು ಪ್ರೀತಿಸಿ ವಿವಾಹವಾಗಿದ್ದಳು. ಆದರೆ ಈಕೆಗೆ ಪ್ರತಿನಿತ್ಯವು ಸತತವಾಗಿ ಗಂಡ ಕಿರುಕುಳ ನೀಡುತ್ತಿದ್ದ