17 ವರ್ಷದ ಬಾಲಕನನ್ನು ಅಪಹರಿಸಿದ 24 ವರ್ಷ ವಯಸ್ಸಿನ ಗೃಹಿಣಿಯ ವಿರುದ್ಧ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಇಬ್ಬರು ಬೆಂಗಳೂರಿನಿಂದ 95 ಕಿ.ಮೀ ದೂರದಲ್ಲಿರುವ ಕೆಜಿಎಫ್ ನಗರದ ನಿವಾಸಿಗಳಾಗಿದ್ದಾರೆ. ಒಂದೇ ಬಡಾವಣೆಯಲ್ಲಿ ವಾಸಿಸುತ್ತಿದ್ದರಿಂದ ಚಿರಪರಿಚಿತರಾಗಿದ್ದರು. ಇಬ್ಬರ ಪರಿಚಯ ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಆರೋಪಿ ಮಹಿಳೆಯ ಪತಿ ಕುಡಿಯುವ ಟ್ಯಾಂಕರ್ ನೀರು ಸರಬರಾಜು ಮಾಡುವ ವೃತ್ತಿಯಲ್ಲಿದ್ದಾನೆ. ವಿವಾಹವಾಗಿ ಎರಡು ವರ್ಷಗಳಾಗಿದ್ದರೂ ಮಕ್ಕಳಾಗಿರಲಿಲ್ಲ. ಮಹಿಳೆಯ ಜೊತೆ ಪರಾರಿಯಾಗಿದ್ದ ಬಾಲಕ