ಬೆಂಗಳೂರು: ಆಕಸ್ಮಿಕವಾಗಿ ಬಿದ್ದ ಮೊಬೈಲ್ ಎತ್ತಿಕೊಳ್ಳಲು ಮಹಿಳೆಯೊಬ್ಬರು ಮೆಟ್ರೊ ಹಳಿಗೆ ಧುಮುಕಿದ ಘಟನೆ ಇಂದಿರಾ ನಗರದಲ್ಲಿ ನಡೆದಿದೆ.ನಿನ್ನೆ ಸಂಜೆ ವೇಳೆ ಇಂತಹದ್ದೊಂದು ಘಟನೆ ನಡೆದಿದೆ. ಇಂದಿರಾ ನಗರ ಮೆಟ್ರೊ ರೈಲ್ವೇ ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಾ ನಿಂತಿದ್ದಾಗ ಮಹಿಳೆಯ ಮೊಬೈಲ್ ಹಳಿಗೆ ಬಿದ್ದಿದೆ.ತಕ್ಷಣವೇ ಮೊಬೈಲ್ ಎತ್ತಿಕೊಳ್ಳಲು ಮಹಿಳೆ ಹಳಿಗೇ ಧುಮುಕಿದ್ದಾಳೆ. ಅದೃಷ್ಟವಶಾತ್ ಇದನ್ನು ಗಮನಿಸಿದ ಮೆಟ್ರೊ ಸಿಬ್ಬಂದಿ ಹಳಿಗಳ ಮೇಲಿನ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ತಕ್ಷಣವೇ ಮಹಿಳೆಯನ್ನು ಮೇಲಕ್ಕೆ ಎಳೆದುಕೊಳ್ಳಲಾಗಿದೆ. ಹೀಗಾಗಿ