ಆ ಮಹಿಳಾ ಪತ್ರಕರ್ತೆ ಎಂದಿನಂತೆ ತನ್ನ ಮನೆಯಲ್ಲಿದ್ದಳು. ಆದರೆ ಅಪರಿಚಿತ ದುಷ್ಕರ್ಮಿಗಳ ಗುಂಪು ಏಕಾಏಕಿಯಾಗಿ ಆಕೆಗೆ ನುಗ್ಗಿತು. ಮುಂದೆ ಘನಘೋರ ಕೃತ್ಯ ನಡೆದುಹೋಯಿತು.ಪತ್ರಕರ್ತೆಯ ಮನೆಗೆ ನುಗ್ಗಿದ ಕಿರಾತಕರ ಗುಂಪೊಂದು ಆಕೆ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ನಡೆದಿದೆ. ಬಾಂಗ್ಲಾದೇಶದ ಆನಂದ ಟಿವಿಯಲ್ಲಿ ಹಾಗೂ ಬಾಂಗ್ಲಾದ ದೈನಿಕ ಜಾಗೃತೋದಲ್ಲಿ ಕೆಲಸ ಮಾಡುತ್ತಿದ್ದ ಸುಬರ್ನಾ ನೋದಿ(30) ಭೀಕರವಾಗಿ ಕೊಲೆಯಾದ ಪತ್ರಕರ್ತೆಯಾಗಿದ್ದಾಳೆ.ಪಬ್ನಾ ಜಿಲ್ಲೆಯ ರಾಧಾ ನಗರದಲ್ಲಿ ಈ ದುರ್ಘಟನೆ ನಡೆದಿದೆ.