ಬೆಂಗಳೂರು: ಚಿನ್ನಾಭರಣ ತಮ್ಮದಾಗಿಸಿಕೊಳ್ಳುವ ದುರಾಸೆಯಿಂದ ಸ್ವಂತ ದೊಡ್ಡಮ್ಮನನ್ನೇ ಯುವತಿಯೊಬ್ಬಳು ಹತ್ಯೆ ಮಾಡಿದ ಘಟನೆ ಅಶೋಕನಗರದಲ್ಲಿ ನಡೆದಿದೆ.28 ವರ್ಷದ ಶಬಾನ ಬಂಧಿತೆ. ಈಕೆ ಮಾರ್ಚ್ 4 ರಂದು 62 ವರ್ಷದ ತನ್ನ ದೊಡ್ಡಮ್ಮನನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಲ್ಲದೆ, ಆಕೆಯ ಬಳಿಯಿದ್ದ ಅಪಾರ ಚಿನ್ನಾಭರಣಗಳನ್ನು ದೋಚಿದ್ದಳು.ಆಗಾಗ ದೊಡ್ಡಮ್ಮನ ಮನೆಗೆ ಬರುತ್ತಿದ್ದ ಶಬಾನ ಆಕೆಯ ಬಳಿ ಚಿನ್ನಾಭರಣಗಳಿರುವುದನ್ನು ಗಮನಿಸಿದ್ದಳು. ಘಟನೆ ದಿನ ಮೃತ ಮಹಿಳೆಯ ಮಗ ಮನೆಯಲ್ಲಿರಲಿಲ್ಲ. ಆ ದಿನವನ್ನೇ ನೋಡಿಕೊಂಡು ಮನೆಗೆ ಬಂದ