ಬೆಂಗಳೂರು: ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ಗಳ ಮೂಲಕ ವಧು-ವರಾನ್ವೇಷಣೆ ಮಾಡಿ ವಂಚನೆಗೊಳಗಾಗುವ ಹಲವು ಪ್ರಕರಣಗಳನ್ನು ನೋಡಿದ್ದೇವೆ. ಇದು ಆ ವಂಚನೆಯ ಮತ್ತೊಂದು ಮುಖ.ಆನ್ ಲೈನ್ ನಲ್ಲಿ ಹೆಣ್ಣು ಹುಡುಕುತ್ತಿದ್ದ ಯುವಕರನ್ನು ಮರುಳು ಮಾಡಿ ವಿಡಿಯೋ ಕಾಲ್ ನಲ್ಲಿ ಅವರನ್ನು ಬೆತ್ತಲು ಮಾಡಿ ಆ ಫೋಟೋ, ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಖತರ್ನಾಕ್ ಹೆಣ್ಣೊಬ್ಬಳ ಕಹಾನಿ ಬೆಳಕಿಗೆ ಬಂದಿದೆ. ಕೆಲ ದಿನಗಳ ಹಿಂದೆ ಆಕೆಯಿಂದ ವಂಚನೆಗೊಳಗಾದ ಬೆಂಗಳೂರಿನ ಹುಳಿಮಾವು ನಿವಾಸಿಯೊಬ್ಬರು